Pradhan Mantri Jeevan Jyoti Bhima Yojana : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಇದರ ಅಡಿಯಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ವರೆಗೂ ಜೀವ ವಿಮೆ ಪಡೆಯಬಹುದಾಗಿದೆ. ಈ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ? ಅರ್ಜಿಯನ್ನು ಯಾರು ಸಲ್ಲಿಸಬಹುದಾಗಿದೆ ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.
ಸ್ನೇಹಿತರೇ ಇದೇ ರೀತಿ ಹೊಸ ಹೊಸ ಮಾಹಿತಿಗಳು , ಸರ್ಕಾರಿ ಜೋಜನೆಗಳು, ಸರ್ಕಾರಿ ಉದ್ಯೋಗಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಕೆಲಸದ ವಿವರಗಳು ಮತ್ತು ಇನ್ನು ಹೆಚ್ಚು ಮಾಹಿತಿಗಳನ್ನು ತಿಳಿಯಲು ನಮ್ಮ ವೆಬ್ಸೈಟ್ ಗೆ ಬೇಟಿ ನೀಡಿ ಅಥವಾ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಗಳನ್ನು ಫಾಲೋ ಮಾಡಿ ಹಾಗೂ ದಿನನಿತ್ಯ ನಡೆಯುವ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ 2024 – PMJJBY
ಕೇಂದ್ರ ಸರ್ಕಾರವು ದೇಶದ ಪ್ರತಿಯೊಬ್ಬ ನಾಗರಿಕರು ಜೀವ ವಿಮೆಯನ್ನು ಹೊಂದಿರಬೇಕು ಎನ್ನುವ ಉದ್ದೇಶದಿಂದ ಈ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಜೀವ ವಿಮೆ ಯೋಜನೆಯನ್ನು ಸರ್ಕಾರವು 2015 ರಲ್ಲಿಯೇ ಜಾರಿಗೊಳಿಸಿ ದ್ದು. ಈ ಜೀವ ವಿಮೆಯು ಒಂದು ವರ್ಷದವರಿಗೆ ಇರುತ್ತದೆ ಮತ್ತು ಇದನ್ನು ಒಂದು ವರ್ಷದ ನಂತರ ನವೀಕರಿಸಬಹುದಾಗಿದೆ.
ದೇಶದಲ್ಲಿ ಬಡತನ ರೇಕೆಗಿಂತ ಕಡಿಮೆ ಇರುವ ಕುಟುಂಬಗಳು ಮತ್ತು ಕಡಿಮೆ ಆದಾಯ ಹೊಂದಿರುವ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಒಂದು ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ವಿಮಾ ಕಂಪನಿಗಳು, ನಿಗದಿತ ವಾಣಿಜ್ಯ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸರ್ಕಾರಿ ಬ್ಯಾಂಕುಗಳ ಸಹಭಾಗಿತ್ವದಲ್ಲಿ ನಿರ್ವಹಿಸುತ್ತದೆ.
ಈ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಯು ಸುಮಾರು ಎರಡು ಲಕ್ಷದವರೆಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಯಾವುದೇ ಕಾರಣದಿಂದ ಮರಣ ಹೊಂದಿದರು ಕೂಡ ಕೇವಲ 436 ರೂಪಾಯಿಗಳು ವಾರ್ಷಿಕ ಪ್ರೀಮಿಯಂನಲ್ಲಿ 2 ಲಕ್ಷ ರೂಪಾಯಿಗಳ ಜೀವ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ಕೆಳಗೆ ಓದಿ.
ಈ ವಿಮಾ ಯೋಜನೆಯನ್ನು ಎಲ್ಲಿ ಪಡೆಯಬಹುದಾಗಿದೆ?
ಕೇಂದ್ರ ಸರ್ಕಾರವು ನೀಡುವ ಈ ಪ್ರಧಾನ ಮಂತ್ರಿ ಜೀವ ಜ್ಯೋತಿ ವಿಮಾ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ವಲಯದ ಭೀಮ ಕಂಪನಿಗಳ ಮೂಲಕ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸರ್ಕಾರಿ ಬ್ಯಾಂಕ್ ಗಳೊಂದಿಗೆ ಟೈ ಅಪ್ ಆಗಿ ನಡೆಸುತ್ತಿರುತ್ತದೆ. ಈ ಮೇಲೆ ನೀಡಲಾಗಿರುವ ಯಾವುದಾದರೂ ಒಂದು ಬ್ಯಾಂಕುಗಳಿಗೆ ಭೇಟಿ ನೀಡಿ ನೀವು ಈ ವಿಮಾ ಯೋಜನೆಯನ್ನು ವಾರ್ಷಿಕವಾಗಿ ಪಡೆಯಬಹುದಾಗಿದೆ. ಈ ವಿಮಾ ಯೋಜನೆಯನ್ನು ಪಡೆದ ಅಭ್ಯರ್ಥಿಗಳು ಪ್ರತಿ ವರ್ಷ ಮೇ 31ರಂದು 436 ರೂಗಳನ್ನು ಪಾವತಿಸಬೇಕಾಗುತ್ತದೆ.
ಈ ಯೋಜನೆಯನ್ನು ಪಡೆಯಲು ಯಾರು ಅರ್ಹರು?
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು 18ರಿಂದ 50 ವರ್ಷದ ವಯಸ್ಸಿನವರಾಗಿರಬೇಕು ಮತ್ತು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಭಾರತೀಯರು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
50 ವರ್ಷ ವಯಸ್ಸನ್ನು ಪೂರ್ಣಗೊಳಿಸುವ ಮೊದಲೇ ಈ ಯೋಜನೆಯನ್ನು ಪಡೆದುಕೊಂಡಿದ್ದರೆ ಅಂತವರು ಪ್ರೀಮಿಯಂ ಪಾವತಿಗೆ ಒಳಪಟ್ಟು 55 ವರ್ಷಗಳವರೆಗೆ ಈ ಯೋಜನೆಯಡಿಯಲ್ಲಿ ಜೀವ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. ಆದಕಾರಣ ಪ್ರತಿಯೊಬ್ಬ ಭಾರತೀಯರು ಈ ಜೀವ ವಿಮೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ.
PMJJBY ಪ್ರೀಮಿಯಂ ವಿವರಗಳು
ಈ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ಜೂನ್ ಒಂದರಿಂದ ಪ್ರಾರಂಭವಾಗಿ ಮುಂದಿನ ವರ್ಷ ಮೇ 31ರವರೆಗೆ ಕಾಲಾವಧಿ ಇರುತ್ತದೆ. ಈ ಒಂದು ಯೋಜನೆಯನ್ನು ಪಡೆಯುವ ಅಭ್ಯರ್ಥಿಗಳು ವರ್ಷಕ್ಕೆ 436 ರಂತೆ ಪಾವತಿಸಬೇಕಾಗುತ್ತದೆ. ಇದರಂತೆ ಒಂದು ತಿಂಗಳಿಗೆ ಬರಿ 36 ರೂಪಾಯಿ ಅಥವಾ ಒಂದು ದಿನಕ್ಕೆ ಕೇವಲ ಒಂದು ರೂಪಾಯಿ 20 ಪೈಸೆ ಆಗುತ್ತದೆ.
ಈ ಒಂದು ಯೋಜನೆಯನ್ನು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಪಡೆಯುವವರಿಗೆ ವಾರ್ಷಿಕ ಪ್ರೀಮಿಯಂ 436 ಆಗಿರುತ್ತದೆ. ನಂತರ ಸಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಪಡೆಯುವ ಅಭ್ಯರ್ಥಿಗಳಿಗೆ ಪ್ರೀಮಿಯಂನ 3 ಕ್ವಾರ್ಟರ್ಸ್ ರಂತೆ 114 ಅಂದರೆ 342 ಪಾವತಿಸಬೇಕಾಗುತ್ತದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಪಡೆಯುವ ಅಭ್ಯರ್ಥಿಗಳಿಗೆ ಪ್ರೀಮಿಯಂನ ಎರಡು ಕ್ವಾರ್ಟರ್ಸ್ ರಂತೆ 114 ಅಂದರೆ 228 ಪಾವತಿಸಬೇಕಾಗುತ್ತದೆ.
ಈ ಪ್ರೀಮಿಯಂ ವಿವರಗಳನ್ನು ಸಂಪೂರ್ಣವಾಗಿ ತಿಳಿಯಲು ಈ ಕೆಳಗೆ ನೀಡಲಾಗಿರುವ ಟೇಬಲ್ ಅನ್ನು ಗಮನವಿಟ್ಟು ಓದಿ.
ದಾಖಲಾತಿ ಅವಧಿ | ಅನ್ವಯವಾಗುವ ಪ್ರೀಮಿಯಂ |
ಜೂನ್, ಜುಲೈ, ಆಗಸ್ಟ್ | ವಾರ್ಷಿಕ ಪ್ರೀಮಿಯಂ ರೂ. 436 |
ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ | ಪ್ರೀಮಿಯಂನ 3 ಕ್ವಾರ್ಟರ್ಸ್ @Rs.114 ಅಂದರೆ ರೂ.342 |
ಡಿಸೆಂಬರ್, ಜನವರಿ ಮತ್ತು ಫೆಬ್ರವರಿ | ಪ್ರೀಮಿಯಂನ 2 ಕ್ವಾರ್ಟರ್ಸ್ @Rs.114 ಅಂದರೆ ರೂ. 228 |
ಮಾರ್ಚ್, ಏಪ್ರಿಲ್ ಮತ್ತು ಮೇ | 1 ತ್ರೈಮಾಸಿಕ ಪ್ರೀಮಿಯಂ ಅಂದರೆ ರೂ.114 |
ಈ ಜೀವ ವಿಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಕೇಂದ್ರ ಸರ್ಕಾರವು ನೀಡುತ್ತಿರುವ ಈ ಜೀವ ವಿಮಾ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಿದ್ದೇವೆ.
- ಮೊದಲನೆಯದಾಗಿ ಈ ಪ್ರಧಾನಮಂತ್ರಿ ಜೀವ ಜ್ಯೋತಿ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ.
- ನಂತರ ಅರ್ಜಿ ನಮೂನೆಯನ್ನು ಪಡೆಯಿರಿ .
- ನಿಮ್ಮ ಎಲ್ಲ ಮಾಹಿತಿಯನ್ನು ಫಾರ್ಮ್ ನಲ್ಲಿ ಭರ್ತಿ ಮಾಡಿ ಮತ್ತು ಭರ್ತಿ ಮಾಡಿರುವ ಎಲ್ಲಾ ಮಾಹಿತಿಗಳನ್ನು ಮರುಪರಿಶೀಲಿಸಿ.
- ಪಾನ್ ಕಾರ್ಡ್ ಮತ್ತು ಇನ್ನಿತರ ದಾಖಲೆಗಳನ್ನು ಅರ್ಜಿಯೊಂದಿಗೆ ಅಟ್ಯಾಚ್ ಮಾಡಿ.
- ನಂತರ ನೀವು ಭರ್ತಿ ಮಾಡಿದ ಅರ್ಜಿ ಮತ್ತು ಅಟ್ಯಾಚ್ ಮಾಡಿರುವ ಡಾಕ್ಯುಮೆಂಟ್ಗಳೊಂದಿಗೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಗೆ ಸಲ್ಲಿಸಿ.
ಈ ಮೇಲೆ ನೀಡಲಾಗಿರುವ ಎಲ್ಲಾ ವಿಧಾನಗಳನ್ನು ಗಮನವಿಟ್ಟು ಪಾಲಿಸಿ ನೀವು ಈ ಒಂದು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆಗೆ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ನೇಹಿತರೆ ನಮ್ಮ ಮಾಧ್ಯಮದಲ್ಲಿ ನಾವು ಯಾವುದೇ ತರಹದ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ಮತ್ತು ಇದೇ ರೀತಿ ಹೊಸ ಪ್ರಮುಖ ವಿಷಯಗಳ ಬಗ್ಗೆ ತಿಳಿಯಲು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ನಮ್ಮ ವೆಬ್ಸೈಟ್ ಲಿಂಕ್ ಅನ್ನು ಶೇರ್ ಮಾಡಿ ಧನ್ಯವಾದಗಳು.