Prize Money Scholarship | ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 20,000 ರೂ ಪ್ರೋತ್ಸಾಹಧನ ಸಿಗಲಿದೆ ! ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

Prize Money Scholarship : ನಮಸ್ಕಾರ ಸ್ನೇಹಿತರೆ , ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದ 20,000 ರೂ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಅರ್ಹ ಮತ್ತು ಆಸಕ್ತಿ ಉಳ್ಳ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ . ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.

 

Karnataka Forest Department Recruitment | ಅರಣ್ಯ ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

 

ಸ್ನೇಹಿತರೇ ಇದೇ ರೀತಿ ಹೊಸ ಹೊಸ ಮಾಹಿತಿಗಳು , ಸರ್ಕಾರಿ ಜೋಜನೆಗಳು, ಸರ್ಕಾರಿ ಉದ್ಯೋಗಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಕೆಲಸದ ವಿವರಗಳು ಮತ್ತು ಇನ್ನು ಹೆಚ್ಚು ಮಾಹಿತಿಗಳನ್ನು ತಿಳಿಯಲು ನಮ್ಮ ವೆಬ್ಸೈಟ್ ಗೆ ಬೇಟಿ ನೀಡಿ ಅಥವಾ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಗಳನ್ನು ಫಾಲೋ ಮಾಡಿ ಹಾಗೂ ದಿನನಿತ್ಯ ನಡೆಯುವ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

 

 

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ 2024 (Prize Money Scholarship)

ಹೌದು ಸ್ನೇಹಿತರೆ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ನಮ್ಮ ಕರ್ನಾಟಕ ಸರ್ಕಾರದ ಕಡೆಯಿಂದ ಪ್ರೋತ್ಸಾಹ ಧನವನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವಾಗಲಿ ಎಂದು ನಮ್ಮ ಕರ್ನಾಟಕ ಸರ್ಕಾರವು ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡುವುದಾಗಿ ಘೋಷಿಸಿದೆ. ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಪಡೆಯುವುದು ಹೇಗೆ ಎಂದು ಈ ಕೆಳಗೆ ನೀಡಿದ್ದೇವೆ .

ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು ಯಾರು ಅರ್ಹರು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು , ಅರ್ಜಿ ಸಲ್ಲಿಸುವ ವಿಧಾನ , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಇನ್ನು ಹೆಚ್ಚಿನ ಮುಖ್ಯ ವಿಷಯಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ಓದಿ.

 

 

ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರು ?

ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ವಿದ್ಯಾರ್ಥಿಗಳಿಗೆ ಮಾತ್ರ ನೀಡುವುದಾಗಿ ಸರ್ಕಾರವು ಘೋಷಿಸಿದೆ ಮತ್ತು ಇತರ ವರ್ಗಗಳಿಗೆ ಇನ್ನು ಯಾವುದೇ ರೀತಿಯ ಪ್ರೋತ್ಸಾಹ ಧನವನ್ನು ನೀಡುವುದಾಗಿ ಸರ್ಕಾರವು ಇಲ್ಲಿಯವರೆಗೆ ತಿಳಿಸಿಲ್ಲ ಮುಂದೆ ಏನಾದರೂ ಸರ್ಕಾರ ಕಡೆಯಿಂದ ಎಲ್ಲ ವರ್ಗಗಳಿಗೆ ಪ್ರೋತ್ಸಾಹ ಧನವನ್ನು ನೀಡಿದರೆ ಅದನ್ನು ಮೊದಲು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಜಾಯಿನ್ ಆಗಿರಿ.

ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ನಲ್ಲಿ ಕನಿಷ್ಠ 60% ಫಲಿತಾಂಶ ಮೇಲ್ಪಟ್ಟಿರಬೇಕು ಮತ್ತು ವಿದ್ಯಾರ್ಥಿಗಳು ಮೊದಲನೆಯ ಬಾರಿಗೆ ಪಾಸ್ ಆಗಿರಬೇಕು . ಇಂತಹ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ಕೆಳಗೆ ನೀಡಿದ್ದೇವೆ.

 

ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲೆಗಳ ವಿವರಗಳನ್ನು ಈ ಕೆಳಗೆ ನೀಡಿದ್ದೇವೆ.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ದ್ವಿತೀಯ ಪಿಯುಸಿ ಅಂಕಪಟ್ಟಿ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರಗಳು
  • ಚಾಲ್ತಿಯಲ್ಲಿ ಇರುವ ಮೊಬೈಲ್ ನಂಬರ್

ಈ ಮೇಲೆ ನೀಡಿರುವ ವಿದ್ಯಾರ್ಥಿಯ ಎಲ್ಲಾ ದಾಖಲೆಗಳ ವಿವರವು ಅರ್ಜಿ ಹಾಕುವ ಸಂದರ್ಭದಲ್ಲಿ ಮುಖ್ಯವಾಗಿ ಬೇಕಾಗಿರುತ್ತದೆ. ಆದ ಕಾರಣ ಅರ್ಜಿ ಹಾಕುವ ವಿದ್ಯಾರ್ಥಿಗಳು ಈ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರವನ್ನು ಕೆಳಗೆ ನೀಡಿದ್ದೇವೆ.

 

 

ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ? 

ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಎಲ್ಲಾ ವಿಧಾನವನ್ನು ಸರಿಯಾಗಿ ಪಾಲಿಸಿ.

  • ಮೊದಲನೆಯದಾಗಿ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಅಪ್ಲೈ ನವ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿಯಲ್ಲಿ ಕೇಳಿರುವ ನಿಮ್ಮ ವಿವರಗಳನ್ನು ಸರಿಯಾಗಿ ಎಂಟರ್ ಮಾಡಿ ನಂತರ ನಿಮ್ಮ ಶೈಕ್ಷಣಿಕ ವಿವರಗಳನ್ನು ಕೂಡ ಎಂಟರ್ ಮಾಡಿ.
  • ನಂತರ ಅರ್ಜಿಯಲ್ಲಿ ಕೇಳಲಾಗಿರುವ ಅಗತ್ಯವಾದ ಸ್ಕ್ಯಾನ್ ಕಾಪಿಗಳನ್ನು ಅಪ್ಲೋಡ್ ಮಾಡಿ.
  • ಕೊನೆಯದಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ಫಾರ್ಮನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ತಿಳಿಯಲು ನಾವು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ವಿವರಗಳನ್ನು ಹಾಕಿ ನೀವು ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ತಿಳಿಯಬಹುದಾಗಿದೆ.

 

Shakti scheme Karnataka – ಇನ್ನು ಮುಂದೆ ಮಹಿಳೆಯರು ಸ್ಮಾರ್ಟ್ ಕಾರ್ಡನ್ನು ತೋರಿಸಿದರೆ ಮಾತ್ರ ಉಚಿತ ಬಸ್ ಪ್ರಯಾಣ ! ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

 

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? 

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವೆಬ್ಸೈಟ್ ನಲ್ಲಿ ನೀಡಿರುವ ಪ್ರಕಾರ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಅರ್ಜಿಯನ್ನು 30 ಜುಲೈ ಒಳಗೆ ಸಲ್ಲಿಸಬಹುದಾಗಿದೆ.

ಕೊನೆಯ ದಿನಾಂಕ : 30 July 2024

ಆಸಕ್ತಿಯುಳ್ಳ ವಿದ್ಯಾರ್ಥಿಗಳು ಪ್ರೋತ್ಸಾಹ ಧನಕ್ಕೆ ಈ ಮೇಲೆ ನೀಡಿರುವ ಕೊನೆಯ ದಿನಾಂಕದೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಮತ್ತು ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ನಾವು ಮೇಲೆ ನೀಡಿರುವ ವಿಧಾನಗಳನ್ನು ಸಂಪೂರ್ಣವಾಗಿ ಪಾಲಿಸಿ.

ಸ್ನೇಹಿತರೆ ನಮ್ಮ ಮಾಧ್ಯಮದಲ್ಲಿ ನಾವು ಯಾವುದೇ ತರಹದ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ಮತ್ತು ಇದೇ ರೀತಿ ಹೊಸ ಪ್ರಮುಖ ವಿಷಯಗಳ ಬಗ್ಗೆ ತಿಳಿಯಲು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ನಮ್ಮ ವೆಬ್ಸೈಟ್ ಲಿಂಕ್ ಅನ್ನು ಶೇರ್ ಮಾಡಿ ಧನ್ಯವಾದಗಳು.

Leave a Comment